Phone no: 08539220212 or email us: shrigavimathkoppal@gmail.com
15-01-2025 ಬುಧವಾರ
ಶ್ರೀ ಗವಿಮಠದ ಆವರಣ
ಶ್ರೀ ಜ ಗವಿಸಿದ್ಧೇಶ್ವರರು ಪರಂಪರೆಯಲ್ಲಿ ಹನ್ನೊಂದನೆಯವರು. ಪರಮ ಪೂಜ್ಯರು ಗುರುಗಳಿಗಾಗಿ ಸಿದ್ದ ಪಡಿಸಿದ ಸಮಾಧಿಯಲ್ಲಿ ತಾವೇ ಸಜೀವ ಸಮಾಧಿ ಹೊಂದಿ ಗುರು ಭಕ್ತಿಯ ಪರಾಕಾಷ್ಟತೆಯನ್ನು ಜಗಕ್ಕೆ ಸಾರಿದವರು. ಕ್ರಿ.ಶ 1816 ಶ್ರೀಮುಖ ಸಂವತ್ಸರ ಪುಷ್ಯ ಬಹುಳ ಬಿದಿಗೆಯಂದು ಪ್ರಾಣವನ್ನು ಬ್ರಹ್ಮ ಸ್ಥಾನಕ್ಕೇರಿಸಿ ನಿರ್ವಿಕಲ್ಪ ಸಮಾಧಿ ಸಂಯುತರಾದರು. ಅಂದಿನಿಂದಲೇ ಶ್ರೀ ಗವಿಸಿದ್ಧೇಶ್ವರರ ಮಹಾರಥೋತ್ಸವ ಜರುಗುತ್ತಿದೆ.
ಅನ್ನ, ಅಕ್ಷರ, ಅರಿವು, ಆರೋಗ್ಯ, ಅಧ್ಯಾತ್ಮ, ದಾಸೋಹದ ಪುಣ್ಯ ಕ್ಷೇತ್ರ ಶ್ರೀ ಗವಿಮಠ. ಶ್ರೀ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಶ್ರೀ ರುದ್ರಮುನಿ ಶಿವಯೋಗಿಗಳಿಂದ ಬೆಳಗಿದ ಶ್ರೀ ಗವಿಮಠದ ಜ್ಯೋತಿ 11ನೇ ಪೀಠಾಧಿಪತಿಗಳಾದ ಪರಮ ತಪಸ್ವಿ ಶ್ರೀ ಗವಿಸಿದ್ಧೇಶ್ವರರ ಕಾಲಕ್ಕೆ ಪ್ರಜ್ವಲವಾಗಿ ಬೆಳಗತೊಡಗಿತು.
ಕಲ್ಲಿನಡಿಯ ಕೈಲಾಸವಾಗಿರುವ ಶ್ರೀ ಗವಿಮಠದ ಆಧಾರ ಸ್ತಂಭಗಳೆರಡು, ಒಂದು ಶ್ರೀ ಮಠದ ಎಲ್ಲಾ ಪೂಜ್ಯ ಶಿವಯೋಗಿಗಳವರ ತಪ:ಶಕ್ತಿ ಇನ್ನೊಂದು ಸಧ್ಭಕ್ತರ ಭಕ್ತಿ.ಇದುವೇ ಗವಿಮಠದ ಭವ್ಯ ಪರಂಪರೆ
ಅಣ್ಣಾ ಹಜಾರೆ
ಸಾಮಾಜಿಕ ಹೋರಾಟಗಾರರು, ಮಹಾರಾಷ್ಟ್ರಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ನೋಡಿದ ನಂತರ ಅನ್ನಿಸಿದ್ದು, ಇಂತಹ ಅದ್ಭುತ ಜಾತ್ರೆ ಆ ಸ್ವರ್ಗದಲ್ಲೂ ನೆಡೆಯುವುದಿಲ್ಲ. ನನ್ನ 80 ವರ್ಷದ ಜೀವನದಲ್ಲಿ ನಾನು ಇಂತಹ ಜನಸ್ತೋಮವನ್ನು ಪ್ರಪಂಚದಲ್ಲಿ ಎಲ್ಲಿಯೂ ನೋಡಿಲ್ಲ. ಎಲ್ಲಿಯೂ ಇಂತಹ ಉತ್ಸವ ನಡೆಯುವುದಿಲ್ಲ
ಯೋಗಗುರು ಶ್ರೀ ಬಾಬಾ ರಾಮದೇವಜೀ ಮಹಾರಾಜ.
ನಾನು ಹರಿದ್ವಾರ, ಅಲಹಾಬಾದ್, ನಾಸಿಕದಲ್ಲಿ ಕುಂಭಮೇಳ ನೊಡಿದ್ದೇನೆ, ಅಲ್ಲಿ ಕಾರ್ಯಕ್ರಮ ಹಾಗೂ ಯೋಗ ಶಿಬಿರಗಳನ್ನು ಮಾಡಿದ್ದೇನೆ, ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಮೇಲೆ ಕೊಪ್ಪಳದಲ್ಲಿ ಶ್ರದ್ಧೆ ಮತ್ತು ಭಕ್ತಿಗಳ ಮತ್ತೊಂದು ಮಹಾ ಕುಂಭಮೇಳವೇ ನಡೆಯುತ್ತಿದೆ, ಎಂದು ಅನಿಸುತ್ತದೆ. ಅಲ್ಲಿ 12 ವರ್ಷಕೊಮ್ಮೆ ಕುಂಭಮೇಳ ನಡೆದರೆ, ಇಲ್ಲಿ ಪ್ರತಿ ವರ್ಷವು ಮಹಾಕುಂಭಮೇಳವೇ ನಡೆಯುತ್ತದೆ. ಇದು ದಕ್ಷಿಣ ಭಾರತದ ಮಹಾ ಕುಂಭಮೇಳ
ಶ್ರೀ ವಿಶ್ವೇಶತೀರ್ಥ ಪಾದಂಗಳು
ಪೇಜಾವರ ಮಠ, ಉಡುಪಿ.ಈ ದೇಶದಲ್ಲಿ ಜ್ಯಾತ್ಯಾತೀತವಾಗಿ ಭಕ್ತರು ಸೇರುವ ತಾಣಗಳೆಂದರೆ ಕಾಶಿ-ಹರಿದ್ವಾರ. ಅಲ್ಲಿ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಕೊಪ್ಪಳವು ಕಾಶಿ-ಹರಿದ್ವಾರಗಳಂತಹ ಧಾರ್ಮಿಕ ತಾಣ. ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮ ಶ್ರೀ ಗವಿಸಿದ್ಧೇಶ್ವರನ ಜಾತ್ರೆ; ಇದು ಕರುನಾಡಿನ ಪುಣ್ಯ. ಜ್ಯಾತ್ಯಾತೀತವಾಗಿ ಭಕ್ತರನ್ನು ಒಗ್ಗುಡಿಸುತ್ತಾ ನಾಡಿನ ಜನರನ್ನು ಒಂದೆಡೆಗೆ ಸೆಳೆಯುತ್ತಿದೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆ. ದೇಶದ ಮೂಲೆ ಮೂಲೆಗಳಲ್ಲಿ ಅಡ್ಡಾಡಿದ್ದೇನೆ; ಇಷ್ಟೊಂದು ಜನ ಸೇರುವ ಕಾರ್ಯಕ್ರಮವನ್ನು ನಾನು ನೋಡಿಯೇ ಇಲ್ಲ! ಉಡುಪಿಯ ಪರ್ಯಾಯಕ್ಕಿಂತಲೂ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆದೊಡ್ಡ ಕಾರ್ಯಕ್ರಮ!!
ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ.
ನಾನು ಪ್ರಪಂಚದ ಅನೇಕ ದೇಶಗಳಲ್ಲಿ ಸುತ್ತಾಡಿದ್ದೇನೆ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆಯಲ್ಲಿ ಕಂಡುಬರುವ ಭಕ್ತಿಯ ಸಾಗರ ಹಾಗೂ ಭಕ್ತರ ಮಹಾಸಾಗರ ಬೇರೆಲ್ಲೂ ಕಂಡುಬರುವದಿಲ್ಲ. ಇಲ್ಲಿ ಜಗತ್ತಿನ ಏಕಮುಖ ಪ್ರಜ್ಞೆಜಾಗೃತವಾಗಿದೆ. ಶ್ರೀ ಗವಿಮಠ ಹಾಗೂ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆ ನಾಡಿನಲ್ಲಿ ಧರ್ಮಜಾಗೃತಿ ಉಂಟು ಮಾಡುವ ಸುಸಂದರ್ಭ. ಇದು ಪ್ರತಿ ಮನೆ-ಮನಗಳಲ್ಲಿ ಸದ್ಭಾವನೆಯನ್ನುಂಟು ಮಾಡುವ ತಾಣ
ಸದ್ಗುರು, ಸಂಸ್ಥಾಪಕರು, ಈಶ ಫೌಂಡೇಷನ.
“ಇಷ್ಟೊಂದು ಲಕ್ಷಾಂತರ ಸಂಖ್ಯೆಯ ಭಕ್ತರು ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಸೇರುವುದನ್ನು ಪ್ರಾಯಶಃ ವಿಶ್ವದಲ್ಲಿ ಬಹುತೇಕರು ನಂಬಲು ಸಾಧ್ಯವೇ ಇಲ್ಲ. ಲಕ್ಷಾಂತರ ಜನರು ಶಿಸ್ತಿನಿಂದ ಹಾಗೂ ಸಂಯಮದಿಂದ ತಮ್ಮನ್ನೂ ತಾವೇ ನಿಭಾಯಿಸಿಕೊಳ್ಳುವುದು ಭಕ್ತಿ ಪರಾಕಾಷ್ಠೆಯ ಪ್ರತೀಕ. ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ವಿಶ್ವದ ಅತ್ಯಂತ ವಿಭಿನ್ನ ಹಾಗೂ ಅತ್ಯಂತ ಶಕ್ತಿಶಾಲಿ ಆಚರಣೆ”
ಪರಮ ಪೂಜ್ಯ ಜಗದ್ಗುರು
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು.
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಸುತ್ತೂರು ಕ್ಷೇತ್ರ“ನಂಬಬೇಕಾದರೆ ನೋಡಬೇಕು; ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಹೇಗೆ ಸೇರುತ್ತಾರೆ? ಇಷ್ಟೊಂದು ಭಕ್ತರಿಗೆ ಜಾಗ ಎಲ್ಲಿದೆ? ಎನ್ನುವುದನ್ನು ನೀವು ನಂಬಬೇಕಾದರೆ ಈ ಜಾತ್ರೆಯನ್ನು ನೋಡಬೇಕು. ಗುರು-ಶಿಷ್ಯ ಬಾಂಧವ್ಯದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಸಮರ್ಪಣೆಯ ಸಂಕೇತ; ಶ್ರದ್ಧೆಯ ಅರ್ಪಣೆ.”
ಶ್ರೀ ಶಿವಶಾಂತವೀರ ಶರಣರು, ಬಳಗಾನೂರ.
“ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಶ್ರೀ ಗವಿಮಠ ದಾಪುಗಾಲು ಹಾಕುತ್ತಲಿದೆ. ಅಂತೆಯೇ ಸಮಾಜ, ಧರ್ಮ, ಶೈಕ್ಷಣಿಕ ಮುಖಗಳಲ್ಲಿ ಶ್ರೀ ಗವಿಮಠ ಸಮಾಜಮುಖಿ ಚಿಂತನೆಯನ್ನು ಮಾಡುತ್ತಿದೆ. ಈ ಮಹಾ ಜಾತ್ರೆ ಈ ಭಾಗದ ಭಕ್ತರ ಹೃದಯವಾಗಿದೆ”
ಪದ್ಮಭೂಷಣ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು
ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆ ಭಾರತದ ಧರ್ಮ ಮತ್ತು ಭಕ್ತಿಯ ಪ್ರತೀಕವಾಗಿದೆ. ಧರ್ಮ ಮತ್ತು ಜಾತಿಯನ್ನು ಮೀರಿ ನಿಂತಿರುವ ಈ ಜಾತ್ರೆ ಇಡೀ ದೇಶದ ಶ್ರೇಷ್ಠ ಜಾತ್ರೆಗಳಲ್ಲೊಂದಾಗಿದೆ. ಲಕ್ಷಾಂತರ ಜನರು ಇಲ್ಲಿಗೆ ಬಂದು ದೇವರ ದರ್ಶನ ಪಡೆಯಲು ಕಾರಣವೆಂದರೆ, ಗವಿಮಠ ಭಕ್ತಿಯ ಮೂಲ ಕೇಂದ್ರಗಳಲ್ಲೊಂದು. ಇಂತಹ ಕೇಂದ್ರಗಳನ್ನು ಸನ್ನಿಧಾನ ಕ್ಷೇತ್ರಗಳೆಂದು ಕರೆಯಲಾಗುತ್ತದೆ. ತಿರುಪತಿ, ಧರ್ಮಸ್ಥಳ ಸನ್ನಿಧಾನ ಕ್ಷೇತ್ರಗಳಾಗಿವೆ. ಶ್ರೀ ಗವಿಸಿದ್ಧೇಶ್ವರನ ಈ ಪವಿತ್ರ ತಾಣವೂ ಸಹ ಸನ್ನಿಧಾನ ಕ್ಷೇತ್ರಗಳ ಸಾಲಿಗೆ ಸೇರುತ್ತದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಜಾತ್ರೆಗೆ ಬಂದು ಹೋಗುವುದರ ಜೊತೆಗೆ ಸಮಾಜಮುಖಿ ವಿಚಾರ ಹಾಗೂ ಜ್ವಲಂತ ಸಮಸ್ಯೆಗಳ ಹೋಗಲಾಡಿಸುವ ಬಗ್ಗೆ ಭಕ್ತರಲ್ಲಿ ಚಿಂತನೆಯನ್ನು ಮೂಡಿಸುವ ಪ್ರಯತ್ನದ ನಿಟ್ಟಿನಲ್ಲಿ ಪ್ರಾರಂಭವಾದ ಶ್ರೀಮಠದ ವಿನೂತನ ಪ್ರಯೋಗವೆ ಜಾಗೃತಿ ಜಾಥಾ ಕಾರ್ಯಕ್ರಮ. ಇದು ಭಕ್ತನು ಮಠಕ್ಕೆ ಬಂದರೆ ದೈವವೇ ಅವನ ಮನೆ-ಮನಗಳನ್ನು ತಲುಪುವ ಹೃದಯಸ್ಪರ್ಶಿ ಕಾರ್ಯಕ್ರಮವಾಗಿದೆ.
ವಿಡಿಯೋಗಳುಕೊಪ್ಪಳದ ಶ್ರೀ ಗವಿಮಠ ಜಾತ್ರಾ ಮಹೋತ್ಸವವು ವರ್ಷದಿಂದ ವರ್ಷಕ್ಕೆ, ವಿಭಿನ್ನತೆಯ ಮೂಲಕ ನಾಡಿನಾದ್ಯಂತ ಪ್ರಖ್ಯಾತಗೊಂಡಿದೆ. ಜಾತ್ರಯೆಂದರೆ, ಕೇವಲ ಜನ ಸೇರುವ ಧಾರ್ಮಿಕ ಉತ್ಸವವಲ್ಲ. ಅಲ್ಲಿ ಸಮಾಜಮುಖಿ ಸ್ಪಂದನೆಗಳಿರಬೇಕು. ವರ್ತಮಾನ ಜಾಗತಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಯೋಜನೆಗಳಿರಬೇಕು ಎಂಬುದನ್ನು ತಿಳಿಸುತ್ತಿರುವ ಗವಿಮಠದ ಕಾರ್ಯ ಮಾನವೀಕರಣಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಮೌಢ್ಯತೆಗಳ ವಿರುದ್ಧ ಕ್ರಾಂತಿಕಾರಕ ಚಳುವಳಿ ಸಾರುತ್ತಿರುವ ಕೊಪ್ಪಳ ಗವಿಮಠದ ಕಾರ್ಯ ಶ್ಲಾಘನೀಯ.
🔅ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹೋತ್ಸವ ಫೋಟೋ ಚಿತ್ರಣ ವಿಡಿಯೋಗಳುಸಾವಿರ ಸಾವಿರ ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ, ನಿತ್ಯವೂ ಬರುವ ಭಕ್ತರಿಗೆ ನಿತ್ಯದಾಸೋಹದ ಜೋತೆಗೆ ಜಾತ್ರೆಯಲ್ಲಿ 15 ದಿನ ಲಕ್ಷಾಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರೀ ಮಠದ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ನಿರಂತರವಾಗಿ ಪ್ರಸಾದ ಜರುಗುವುದು ಪ್ರಸಾದ ನಿಲಯದ ವಿಸ್ತೀರ್ಣ ಸುಮಾರು ನಾಲ್ಕು ಎಕರೆ ( 2ಲಕ್ಷ ಚದುರ ಅಡಿ) ಯಷ್ಟು ಇದ್ದು ಅದರಲ್ಲಿ ಭವ್ಯವಾದ ಅಡುಗೆಮನೆ ಆಹಾರ ಸಂಗ್ರಹಣೆ ಕೊಠಡಿ ತರಕಾರಿ ಸಂಗ್ರಹಣೆ ಕೊಠಡಿ ಹಾಗೂ ಪ್ರಸಾದ ಸ್ವೀಕರಿಸಲು ವಿಶಾಲವಾದ ಸ್ಥಳಾವಕಾಶವಿದೆ.
ವಿಡಿಯೋಗಳು